ಫೆಲ್ಸೈಟ್
	ಅತಿ ಅಮ್ಲೀಯಶಿಲೆ. ಒಳರಚನೆ ಬಲು ಸೂಕ್ಷ್ಮ. ಇದರ ಖನಿಜ ಕಣಗಳು ಸುಲಭವಾಗಿ ಗೋಚರವಾಗುವುದಿಲ್ಲ. ತೆಳು ಪೊರೆಯನ್ನು ಸೂಕ್ಷ್ಮ ದರ್ಶಕದ ಸಹಾಯದಿಂದ ಪರೀಕ್ಷಿಸಿದಾಗ ಸಹ ಖನಿಜಕಣಗಳು ಅಸ್ಪಷ್ಟೆ ಹಲವು ಫೆಲ್ಸೈಟುಗಳಲ್ಲಿ ಸುಲಭವಾಗಿ ಗುರುತಿಸಬಲ್ಲ ಮತ್ತು ಗಾತ್ರದಲ್ಲಿ ದೊಡ್ಡದಾದ ಖನಿಜಕಣಗಳನ್ನು ನೋಡಬಹುದು. ಇವು ಅಸ್ಪಷ್ಟವಾದ ಶಿಲೆಯ ಮಧ್ಯದಲ್ಲಿ ಹುದುಗಿರುತ್ತವೆ. ಇವುಗಳಿಗೆ ಫೀಸೋಕ್ರಿಸ್ಟ್ ಎಂದು ಹೆಸರು. ಸಾಮಾನ್ಯವಾಗಿ ಕ್ವಾಟ್ರ್ಸ್ ಮತ್ತು ಫೆಲ್ಡ್‍ಸ್ಟಾರ್ ಖನಿಜಗಳು ಹೀಗೆ ಕಂಡುಬರುತ್ತವೆ. ಈ ಬಗೆಯ ರಚನೆಯುಳ್ಳ ಫೆಲ್ಸೈಟಿಗೆ ಫೆಲ್ಸೈಟ್ ಫಾರ್ಫಿರಿ ಎಂದು ಹೆಸರು. ಕ್ವಾಟ್ರ್ಸ್‍ನ ಫೀಸೋಕ್ರಿ <W> ಗಳಲ್ಲಿ ಆ ಶಿಲೆಗೆ ಕ್ವಾಟ್ರ್ಸ್ ಫಾರ್ಫಿರಿ ಎಂದು ಹೆಸರುಂಟು. ಈ ವರ್ಗದ ಶಿಲೆಗಳು ಸಾಮಾನ್ಯವಾಗಿ ಒಡ್ಡುಗಳೋಪಾದಿಯಲ್ಲಿ ಕಂಡುಬರುತ್ತವೆ.

	ನಮ್ಮ ಸೀಮೆಯ ಮಂಡ್ಯ, ಶ್ರೀರಂಗಪಟ್ಟಣ, ತುರುವೇಕೆರೆ ಮತ್ತು ಮೈಸೂರು ತಾಲ್ಲೂಕುಗಳಲ್ಲಿ ಈ ಬಗೆಯ ಅನೇಕ ಒಡ್ಡುಗಳಿವೆ. ಇವು ಗಾತ್ರದಲ್ಲಿ ಕಿರಿದು. ಆದರೆ ಹಲವು ಸುಮಾರು 3-4 ಕಿಮೀಗಿಂತಲೂ ಹೆಚ್ಚು ಅಗಲವಾಗಿದ್ದು, 9 ಮೀ.ಗಳಿಗೂ ಮೀರಿ ಉದ್ದವಾಗಿವೆ. ಇವುಗಳಲ್ಲಿ ಫಾರ್ಫಿರಿಗಳೂ ಉಂಟು ಬಲುಮಟ್ಟಿಗೆ ಫೆಲ್ಡ್‍ಸ್ಟಾರ್ ಮತ್ತು ಹಾರ್ನ್‍ಬ್ಲೆಂಡ್ ಖನಿಜಗಳು ಫೀಸೊಕ್ರಿಸ್ಟುಗಳಾಗಿ ಕಂಡುಬರುತ್ತವೆ. ಇವನ್ನು ಉಜ್ಜಿ ನಯಮಾಡಿ ನಯನ ಮನೋಹರ ಅಲಂಕಾರ ಶಿಲೆಯಾಗಿ ಉಪಯೋಗಿಸಬಹುದು. ರಾತ್ರಿವೇಳೆಯಲ್ಲಂತೂ ಫೀಸೋಕ್ರಿಸ್ಟ್ ಖನಿಜಗಳ ಮೇಲೆ ಬಿದ್ದ ಬೆಳಕು ಪ್ರತಿಫಲಿತವಾಗಿ ಫಳಫಳನೆ ಮಿನುಗುತ್ತ ಕಟ್ಟಡದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮೈಸೂರು ಅರಮನೆಯ ನಯನ ಮನೋಹರ ದರ್ಬಾರ್ ಭವನದ ಭವ್ಯ ಕಂಬಗಳು ಈ ಬಗೆಯ ಶಿಲೆಗಳಿಂದಾದವು.	(ಬಿ.ವಿ.ಜಿ.).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ